M.P. Renukacharya


Bharatiya Janata Party, Karnataka

ಎಮ್ ಪಿ ರೇಣುಕಾಚಾರ್ಯ


ಭಾರತೀಯ ಜನತಾ ಪಾರ್ಟಿ, ಕರ್ನಾಟಕ

Achievement

ಸರ್ವಂಗೀಣ ಅಭಿವೃದ್ಧಿಯ ಹರಿಕಾರ ಎಮ್ ಪಿ ರೇಣುಕಾಚಾರ್ಯ


ಹೊನ್ನಾಳಿಯೆಂಬ ಹೊನ್ನರಳಿದ ಕ್ಷೇತ್ರದಲ್ಲಿ ನಿಮ್ಮೆಲ್ಲರ ಹೃದಯ ತುಂಬಿದ ಅಭಿಮಾನದ ನೆರಳಿನಲ್ಲಿ ಮಾತೆಯರಿಗೆ ಮನೆಯ ಮಗನಾಗಿ, ಸಹೋದರಿ ಸಹೋದರರಿಗೆ ಸೋದರನಾಗಿ ಸಧಾಕಾಲವೂ ನಿಮ್ಮ ಮನೆಗಳ ಅಂಗಳದಲ್ಲಿ ಬೆಳೆಯುತ್ತಿರುವ ನನ್ನಂತಹ ಸಾಮಾನ್ಯನನ್ನು ನಿಮ್ಮ ಸೇವಕನಾಗಿ ಸ್ವೀಕರಿಸಿ ಸತತ ಎರಡು ಬಾರಿ ಸಾಮಾಜಿಕ ನ್ಯಾಯದಡಿ ಜಾತ್ಯಾತೀತವಾಗಿ ಪ್ರೀತಿ ವಿಶ್ವಾಸಗಳಿಂದ ಅಧಿಕಾರ ನೀಡಿ ಬೆಳಸಿ ಹರಸಿ ಹಾರೈಸಿ ಬಾನೆತ್ತರಕ್ಕೆ ಬೆಳಿಸಿದ್ದೀರಿ. ನನ್ನ ಪಾಲಿಗೆ ಅಧಿಕಾರವೆಂಬ ಶಾಶ್ವತವಲ್ಲ ಕೇವಲ ಕ್ಷಣಿಕ ಎಂಬುದು ನನ್ನ ಭಾವನೆ. ನೀವು ನೀಡಿದ ಅಧಿಕಾರವನ್ನು ಈವೆರೆಗೆ ಒಂದು ಕ್ಷಣವೂ ದುರ್ಬಳಕೆ ಮಾಡಿಕೊಳ್ಳದೇ ಪ್ರತಿ ಕ್ಷಣವನ್ನೂ ನಿಮ್ಮ ಪವಿತ್ರ ಸೇವೆಗೆ ಸದ್ಭಳಕೆ ಮಾಡಿಕೊಂಡಿದ್ದೇನೆಂಬ ಆತ್ಮ ತೃಪ್ತಿ ನನಗಿದೆ. ಇದನ್ನು ನೀವು ಪ್ರತ್ಯಕ್ಷವಾಗಿ ಕಂಡಿದ್ದೀರಿ. ಇಚ್ಚಾಶಕ್ತಿ ಇದ್ದರೆ ಒಬ್ಬ ಜನಪ್ರತಿನಿಧಿ ಏನೆಲ್ಲಾ ಸಾಧಿಸಿ ತೋರಿಸಬಲ್ಲ ಎಂಬುದಕ್ಕೆ ನಿಮ್ಮ ಆಶೀರ್ವಾದದಿಂದ ಅಭಿವೃದ್ದಿ ಎಂಬ ಪದಕ್ಕೆ ಕ್ಷೇತ್ರದಲ್ಲಿ ಉತ್ತಮವಾದ ಅರ್ಥ ನೀಡಿದ್ದೇನೆ.

ರಾಜಕೀಯ ಕ್ಷೇತ್ರದ ಪ್ರವೇಶದ ಮುನ್ನಾ ದಿನಗಳಲ್ಲಿ ನನ್ನ ತಾಲ್ಲೂಕಿನಲ್ಲಿ ಜನತೆಗೆ ಏನಾದರೂ ಒಳ್ಳೆಯ ಸೇವೆಮಾಡಬೇಕೆಂಬುದು ಕನಸು ಕಂಡು ರೈತರ ಬಡತೆಯ ಪರವಾಗಿ ಹೋರಾಟ ನಡೆಸಿದ ಅಂದಿನ ದಿನಗಳಲ್ಲಿ ನಾನೆಂದೂ ಮರೆಯುವುದಿಲ್ಲ. ಸದಾ ನನ್ನ ಭಾವನೆಗಳಿಗೆ ಸ್ಫಂದಿಸಿ ಕೈಬಿಡದೇ ಮುನ್ನೆಡೆಸಿ ತಮ್ಮ ಸೇವೆ ಮಾಡುವ ಭಾಗ್ಯ ಕರುಣಿಸಿದ ಜನತಾ ಜನಾರ್ಧವರಿಗೆ ನನ್ನ ಕೋಟಿ ನಮನಗಳು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಚಾರಿತ್ರ್ಯವುಳ್ಳ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವಂತಹ ಅತ್ಯಂತ ಮಹತ್ವದ ಹೊಣೆಗಾರಿಕೆ ನಿಮ್ಮ ಹೆಗಲಿಗಿದೆ. ನನ್ನ ಮೇಲೆ ನೀವು ಹೋರಿಸಿದ ಜವಾಬ್ದಾರಿಯನ್ನರಿತು ಕ್ಷೇತ್ರದ ಸಮಸ್ತ ಜನತೆಗೆ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ನಿಮ್ಮ ದಿನನಿತ್ಯದ ಅಗತ್ಯಕ್ಕೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಶಿಕ್ಷಣ ಆರೋಗ್ಯ ಮುಂತಾದ ಶಾಶ್ವತ ಯೋಜನೆಗಳಿಗೆ 1000 ಕೋಟಿಗೂ ಹೆಚ್ಚು ಅನುದಾನ ಜನಪರವಾದ ಮಹತ್ವವಾದ ಯೋಜನೆಗಳು ಕ್ಷೇತ್ರದಾದ್ಯಂತ ನಿಮ್ಮ ಕಣ್ಣೆದುರಿಗೆ ಪ್ರಬಲ ಸಾಕ್ಷಿಯಾಗಿ ನಿಂತಿವೆ. ನನ್ನ ಜನತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದೆಂಬ ಮಹತ್ವದ ಕನಸು ಹೊತ್ತು ಕ್ಷೇತ್ರವನ್ನು ಸರ್ವಾಂಗೀಣ ಸುಂದರವಾಗಿ ಅಭಿವೃದ್ಧಿ ಪಡಿಸಿ ಮಾದರಿ ತಾಲ್ಲೂಕನ್ನಾಗಿ ರೂಪಿಸುವ ನನ್ನ ಬಹುದೊಡ್ಡ ಕನಸಿಗೆ ನೀವು ಪ್ರೇರಣ ಶಕ್ತಿಯಾಗಿ. ನನಗೆ ಭೀಮ ಬಲ ನೀಡಿ ಸದಾ ನನ್ನ ಬೆನ್ನಯಿಂದೆ ಕಾವಲಿರುವುದೇ ನನಗೆ ಸದಾ ಶ್ರೀರಕ್ಷೆಯಾಗಿದೆ.

ನಾನೆಂದೂ ಅಧಿಕಾರದ ಬೆನ್ನಹತ್ತಿದವನಲ್ಲಾ ನಿಮ್ಮ ಪ್ರೀತಿ ವಿಶ್ವಾಸವೇ ನನಗೆ ಮುಖ್ಯ, ಎಲ್ಲವನ್ನೂ ಸಾಧಿಸಿದ್ದೇನೆ ಎಂದು ನಾನೆಂದೂ ಅಂದುಕೊಂಡಿಲ್ಲ. ಸಾಧಿಸಿರುವುದು ಸಾಕಿಷ್ಟಿದ್ದರೂ ಇನ್ನೂ ಸಾಧಿಸಬೇಕಾದದ್ದು ಬೆಟ್ಟದಷ್ಟಿದೆ. ನಿಮ್ಮ ಅಭಿಮಾನದ ಹರಕೆ ಹಾರೈಕೆ ನನಗೆ ಸದಾ ಇದ್ದಲ್ಲಿ ನೀವುಗಳು ನೀಡುವ ಸಹಕಾರದಿಂದ ಸಾಧಿಸಿ ತೋರಿಸುತ್ತೇನೆಂದು ನಿಮ್ಮೆಲ್ಲರ ಆಶೀರ್ವಾದ ಬೇಡುತ್ತಿದ್ದೇನೆ. ಕ್ಷೇತ್ರದ ವಿತರಕ್ಷಣೆ ಮಾದರಿ ತಾಲ್ಲೂಕಿನ ಕನಸಿಗೆ ಮೂರನೇ ಬಾರಿಗೂ ನಿಮ್ಮ ಸೇವೆ ಅವಕಾಶ ಮಾಡಿಕೊಳ್ಳುತ್ತೀರೆಂದು ನನ್ನ ದೃಡ ನೀವುಗಳು ನನ್ನ ಮಾಲೀಕರು ನಾನು ನಿಮ್ಮ ಸೇವಕ ತನಕ ನಾನೆಂದೂ ಕುಗ್ಗುವುದಿಲ್ಲ ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಉತ್ತಮ ಸೇವೆಗಳು ನಿಮಗೆ ನೀಡಲು ಉತ್ಸುಕನಾಗಿದ್ದು ನೀವು ಅಭಿಮಾನದಿಂದ ತುಂಬು ಹೃದಯದಿಂದ ಹರಸಿ ಹಾರೈಸುತ್ತೀರೆಂಬ ದೃಢ ವಿಶ್ವಾಸದಿಂದ ನನ್ನ ಮನದಾಳದ ಇಂಗಿತವನ್ನು ನಿಮ್ಮ ಮುಂದೆ ಅರುಹಿದ್ದೇನೆ ನಿಮ್ಮ ಆಶೀರ್ವಾದಗಳಿಂದ ಕಷ್ಟ ಸುಖಗಳನ್ನು ಸಮನಾಗಿ ಹಂಚಿಕೊಂಡು ನಿಮ್ಮೆಲ್ಲರಿಗೆಪ್ರಮಾಣಿಕ ಸೇವೆ ಒದಗಿಸುತ್ತೇವೆಂಬ ಭರವಸೆ ನನಗಿದೆ.

ಕಳೆದ ಚುನಾವಣೆಯಲ್ಲಿ ನನಗೂ ಸೋಲನ್ನುಂಟಾಗಿದ್ದರೂ ಇದರಿಂದ ನಾನೆಂದು ವಿಚಲಿತನಾಗದೇ ಅಂದಿನಿಂದ ಇಂದಿನ ವರೆಗೂ ತಾಲ್ಲೂಕಿನ ರೈತರು ಜನ ಸಾಮಾನ್ಯರ ಜಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಸರ್ಕಾರದ ವಿರುದ್ದ 10 ಹಲವಾರು ಹೋರಾಟಗಳನ್ನು ನಡೆಸುತ್ತಿದ್ದು, ಸಮಸ್ಯೆಗಳಿಗೆ ಮುಂಬರುವ ದಿನಗಳಲ್ಲಿ ಪರಿಹಾರ ಹುಡುಕಲು ಪ್ರಯತ್ನಿಸುವ ವಿಶ್ವಾಸ ನನ್ನದಾಗಿದೆ.

ಅರೆ ಮಲೆನಾಡು, ಬಯಲು ಸೀಮೆಯಂತಹ ಭೌಗೋಳಿಕ ಲಕ್ಷಣ ಹೊಂದಿರುವ ನ್ಯಾಮತಿ ವ್ಯಾಪ್ತಿಗೆ ಸೇರಿದ ಗ್ರಾಮಗಳು ಉತ್ತಮ ಸಂಸ್ಕøತಿ ಹೊಂದಿರುವ ಇಲ್ಲಿನ ಜನತೆ, ಹೃದಯ ಶ್ರೀಮಂತಿಕೆಯುಳ್ಳವರು ಎಂಬುದರಲ್ಲಿ ಎರಡು ಮಾತಿಲ್ಲ. ಬ್ರಿಟಿಷರ ಕಾಲದಲ್ಲಿ ಉತ್ತಮ ವ್ಯಾಪಾರಿ ಕೇಂದ್ರವಾಗಿತ್ತು ಎಂಬುದಕ್ಕೆ ಪ್ರಸ್ತುತ ಸನ್ನಿವೇಶ ಸಾಕ್ಷಿಯಾಗಿದೆ.

ಈ ಭಾಗದ ಜನತೆಗೆ ನ್ಯಾಮತಿ ತಾಲ್ಲೂಕಾಗಬೇಕೆಂಬ ಬಹುದಿನಗಳ ಕನಸಿಗೆ ತಮ್ಮ ಸಹಕಾರದಿಂದ ನನಸಾಗಿಸಿದ್ದೇನೆ. ಅನೇಕ ವರ್ಷಗಳಿಂದ ತಾಲ್ಲೂಕು ಬೇಡಿಕೆಗೆ ಹಲವಾರು ಸಂಘ ಸಂಸ್ಥೆಗಳು ತಾಲ್ಲೂಕು ಹೋರಾಟ ಸಮಿತಿಯವರು ಪದೇ ಪದೇ ಮನವಿ ನೀಡಿ ಒತ್ತಡ ಹಾಕಿದರೂ ಜೊತೆಗೆ ಹಿಂದಿನ ದಿನಗಳಿಂದಲೂ ರಾಜ್ಯದಲ್ಲಿ ಹೊಸ ತಾಲ್ಲೂಕುಗಳ ಬೇಡಿಕೆಗೆ ಸರ್ಕಾರಗಳು ವಾಸುದೇವ ಸಮಿತಿ, ಹುಂಡೇಕಾರ ಸಮಿತಿ, ಗದ್ದಿಗೌಡರ್, ಎಂ.ಬಿ. ಪ್ರಕಾಶ್ ಸಮಿತಿಗಳು ಇಲ್ಲಿಯವರೆಗೆ ಬಂದು ಸಾರ್ವಜನಿಕರ ಮನವಿ ಸ್ವೀಕರಿಸಿದ್ದರೂ ತಮ್ಮ ಶಿಫಾರಸ್ಸುಗಳಲ್ಲಿ ನ್ಯಾಮತಿಯನ್ನು ಹೊಸ ತಾಲ್ಲೂಕನ್ನಾಗಿ ಮಾಡುವ ಯಾವುದೇ ಶಿಫಾರಸ್ಸು ಸರ್ಕಾರದ ಮುಂದಿಲ್ಲ ಎಂಬ ಆದೇಶ ಬರೆದು ಸಾವರ್ಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದವು ಎಂಬುದು ಸರ್ಕಾರದ ದಾಖಲೆಗಳೇ ಹೇಳುತ್ತವೆ. ಸನ್ನಿವೇಶವನ್ನು ಮನಗಂಡು ನನ್ನ ಹೋರಾಟದ ದಿನಗಳಿಂದ ಈವರೆಗೆ ಈ ಭಾಗದ ಜನತೆಯ ಜೊತೆಗೆ ಇಡೀ ಸರ್ಕಾರದ ಮುಂದೆ ಹಲವಾರು ಬಾರಿ ಮನವಿಮಾಡಿದರೂ ತಾಲ್ಲೂಕಿನ ಕನಸು ನನಸಾಗದೇ ಉಳಿದಿದ್ದನ್ನು ತಾವು ಈವರೆಗೆ ಮನಗಂಡಿದ್ದೀರಿ.

ಛಲ ಬಿಡದ ತ್ರಿವಿಕ್ರಮನಂತೆ ಈ ಕೆಲಸವನ್ನು ನಿಮ್ಮೆಲ್ಲರ ಆಶೀರ್ವಾದದಿಂದ ಸಾಧಿಸಿ ತೋರಿಸುತ್ತೇನೆ ಎಂಬ ಸಂಕಲ್ಪದಿಂದ ಮನ್ಯ ಮುಖ್ಯಮಂತ್ರಿಗಳ ಬಳಿಪಟ್ಟು ಹಿಡಿದು ಯಾವುದೇ ಸಮಿತಿಗಳು ಶಿಫಾರಸ್ಸು ಮಾಡದಿದ್ದರೂ ನನ್ನಜನತೆಯ ಹಿತದೃಷ್ಟಿ ಕಾಪಾಡುವ ಹೊಣೆ ನನ್ನದು ಎಂಬ ಪಟ್ಟು ಹಿಡಿದು ಕೊನೆಗೂ ನ್ಯಾಮತಿಯನ್ನು ಹೊಸ ತಾಲ್ಲೂಕನ್ನಾಗಿ 2013ರ ಬಜೆಟ್‍ನಲ್ಲಿ ತಮ್ಮೆಲ್ಲರ ಪರಿಶ್ರಮ ಸಹಕಾರದಿಂದ ನಿಮ್ಮ ಬೇಡಿಕೆಯನ್ನು ಈಡೇರಿಸುವಲ್ಲಿ ಯಸಸ್ಸು ಕಂಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ಆಡಳಿತಾತ್ಮಕ ದೃಷ್ಠಿಯಿಂದ ನ್ಯಮತಿ ತಾಲ್ಲೂಕಿಗೆ ಒಳಪಡುವ ಗ್ರಾಮಗಳಲ್ಲಿ ನನ್ನ ಶಕ್ತಿಮೀರಿ ಶಾಶ್ವತ ಯೋಜನೆಗಳು ಉತ್ತಮ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ತೃಪ್ತಿ ನನಗಿದೆ.

ಎಲ್ಲಾ ಯಶಸ್ಸಿನ ಹಿಂದೆ ನನ್ನ ಪ್ರಯತ್ನಕ್ಕೆ ಪ್ರೇರಣಾ ಶಕ್ತಿ ನನ್ನ ಜನತೆ ಎಂಬುದನ್ನು ಮರೆಯುವಂತಿಲ್ಲ. ಮಾನಸಿಕವಾಗಿ ದಾವಣಗೆರೆ ಜಿಲ್ಲೆಯಲ್ಲಿದ್ದರೂ ನಮ್ಮ ಮಾತೃ ಜಿಲ್ಲೆ ಶಿವಮೊಗ್ಗಕ್ಕೆಸೇರ್ಪಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಮಗೆ ಭರವಸೆ ನೀಡಿದ್ದೇನೆ. ಈ ಕರ್ಯ ಮಾಡಿಯೇ ತೀರುತ್ತೇನೆಂಬ ವಿಶ್ವಾಸ ನನಗಿದೆ. ಹೊಸ ತಾಲ್ಲೂಕಿಗೆ ಅವಶ್ಯವಾದ ಎಲ್ಲ ಇಲಾಖೆ ಕಛೇರಿಗಳನ್ನು ಒಂದೇ ಸಂಕೀರ್ಣದಲ್ಲಿ ಸ್ಥಾಪಿಸಿ ಸಾರ್ವಜನಿಕರಿಗೆ ಉತ್ತಮ ಆಡಳಿತ ಸಿಗುವಂತೆ ಮಾಡುವ ಚಿಂತನೆಯಿದ್ದು ಈ ಭಾಗದ ಮುಖ್ಯರಸ್ತೆಯಲ್ಲಿ 10 ಎಕರೆ ವಿಸ್ತೀರ್ಣವನ್ನು ಸಾರ್ವಜನಿಕರು ಒದಗಿಸಿದಲ್ಲಿ ಆತ್ಯಾಧುನಿಕ ಕಟ್ಟಡ ಸಂಕೀರ್ಣ ನಿರ್ಮಾಣ ಮಾಡಿಸುವ ಆಕಾಂಕ್ಷೆ ನಮ್ಮದಾಗಿದ್ದು ಈ ಪ್ರಯತ್ನಕ್ಕೆ ಸಹಕಾರ ಮುಖ್ಯ.

ಈ ಭಾಗದ ಜನತೆಗೆ ಮುಖ್ಯವಾದ ಉತ್ತಮವಾದ ಕುಡಿಯುವ ನೀರಿನ ಯೋಜನೆಯನ್ನು 10 ಕೋಟಿ ವೆಚ್ಚದಲ್ಲಿ ಸಾಕಾರಗೊಳಿಸಿ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾಗಿದೆ. 131 ಕೋಟಿ ವೆಚ್ಚದ ಚತುಷ್ಪಥ ರಸ್ತೆ 30 ಹಾಸಿಗೆ ಆಸ್ಪತ್ರೆ ಪ್ರಥಮ ದರ್ಜೆ ಕಾಲೇಜು ಕೃಷಿ ಮಾರಿಕಟ್ಟೆ ಸಂಕೀರ್ಣ ನೂತನ ಗ್ರಾಮ ಪಂಚಾಯ್ತಿ ಕಟ್ಟಡ, ನೂತನ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಕಟ್ಟಡ ಮುಂತಾದ ಜನಪರ ಯೋಜನೆಗಳನ್ನು ನ್ಯಾಮತಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುವ ಮುಂದಾಲೋಚನೆಯಿಂದ ಮಂಜೂರು ಮಾಡಿಸಿ, ಸಾರ್ವಜನಿಕರ ಸೇವೆಗೆ ಲೋಕಾರ್ಪಣೆ ಮಾಡಲಾಗಿದೆ.

ಈ ಎಲ್ಲಾ ಪ್ರಯತ್ನ ತಮ್ಮ ಸೇವೆಗೆಂದು ಮೀಸಲಾಗಿದ್ದು, ನನ್ನ ಅಳಿಲು ಸೇವೆಯನ್ನು ಪ್ರಮಾಣಿಕವಾಗಿ ಸಲ್ಲಿಸಿದ್ದೇನೆ. ಸಾಮಾನ್ಯವಾಗಿ ನನ್ನನ್ನು ನೀವುಗಳು ಅಸಮಾನ್ಯನಾಗಿ ಬೆಳಸಿ ಜಾತ್ಯಾತೀತವಾಗಿ ಅಭಿಮಾನದಿಂದ ಎರಡು ಭಾರಿ ಆಯ್ಕೆ ಮಾಡಿದ್ದೀರಿ. ತಮ್ಮ ಸೇವೆಗೆ ನಾನೆಂದು ಕಂಕಣ ಬದ್ದನಾಗಿದ್ದು, ನ್ಯಾಮತಿ ತಾಲ್ಲೂಕನ್ನು ಮುಂಬರುವ ದಿನಗಳಲ್ಲಿ ಈ ಭಾಗಕ್ಕೆ ಸೇರಿದ ಗ್ರಾಮಗಳನ್ನು ಮಾದರಿಯಾಗಿ ಅಭಿವೃದ್ದಿ ಪಡಿಸುವ ಮಹತ್ವ ಪೂರ್ಣ ಕನಸು ನನ್ನಾದಾಗಿದ್ದು ಈ ಕನಸಿಗೆ ತಾವುಗಳು ನೀರೆದು ಪೋಷಿಸುತ್ತಾರೆ ಎಂದು ನಂಬಿದ್ದೇನೆ. ಪ್ರಸ್ತುತ ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರಾದ ನ್ಯಾಮತಿ ತಾಲ್ಲೂಕನ್ನು ಈ ಸರ್ಕಾರ ಮುಂದುವರೆಸಿ ಘೋಷಣೆ ಮಾಡಿದೆ ಹೊರತು ಇದರಲ್ಲಿ ಈ ಸರ್ಕಾರದ ಪಾತ್ರವಿಲ್ಲ. ಅಭಿವೃದ್ದಿ ಎಂಬ ಪದಕ್ಕೆ ಅರ್ಥ ನೀಡಿದ ಯುವನಾಯಕ ಯಾವುದೇ ಕ್ಷೇತ್ರದಲ್ಲಿ "ಸಾಧನೆ" ಎಂಬುದು ಸಾರ್ಥಕತೆಯ ಪ್ರತಿಬಿಂಬ ಆದರೆ ಯಾವುದೇ ಜನಪರ ಚಿಂತನೆ ಮಾಡದವರಿಗೆ ಸಾಧಕರೆನ್ನುವುದಿಲ್ಲಾ, ಆದರೆ ತಳಮಟ್ಟದಿಂದಲೇ ಅದ್ಭುತ ಸಾಧನೆಗೈದು ಸಾಧಕರೆಂಬ ಸಾಲಿನ ಜನಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡವರೇ ಹೊನ್ನಾಳಿಯೆಂಬ ಹೊನ್ನರಳಿದ ಪುಣ್ಯನೆಂದ ಯುವರಾಜಕಾರಣಿ. ಜನರಗೆದ್ದ ಜನನಾಯಕ

ಹೊನ್ನಾಳಿ ವಿಧಾನ ಸಬಾ ಕ್ಷೇತ್ರದ ಸರ್ವಾಗೀಂಣ ಅಭಿವೃದ್ದೀಯನ್ನು ಗುರಿಯಾಗಿಟ್ಟುಕೊಂಡು ಶಿಕ್ಷಣ, ಆರೋಗ್ಯ, ರಸ್ತೆಗಳು, ಕುಡಿಯುವ ನೀರು, ವಿದ್ಯಾರ್ಥಿಯ ನಿಲಯಗಳು, ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಮತ್ತು ಡಿಪೋ, ತುಂಗಾ ಭದ್ರಾ ನದಿಗೆ ನೂತನ ಸೇತುವೆ, 131 ಕೋಟಿ ವೆಚ್ಚದ ಹೊನ್ನಾಳಿ ಸವಳಂಗ ಚತುಸ್ಪತಾ ಹೆದ್ದಾರಿ, ಭದ್ರಾ ಮತ್ತು ತುಂಗಾ ನಾಲಾ ಆಧುನೀಕರಣ, ಆಸ್ಪತ್ರೆ, ದಾದಿಯರ ಕಟ್ಟಡಗಳು, ಕಿತ್ತೂರು ರಾಣಿ ಚನ್ನಮ್ಮ ಹಾಗೂ ಮೊರಾರ್ಜಿ ವಸತಿ ಶಾಲೆಗಳು, ಡಿಪ್ಲೋಮೋ, ಹಾಗೂ ಐ.ಟಿ.ಐ ಕಾಲೇಜುಗಳು ಅಲ್ಪಸಂಖ್ಯಾಂತರ ಉರ್ದು ಪ್ರೌಢಾ ಶಾಲೆ ಮತ್ತು ಮಸೀದಿ ದರ್ಗಾ ಅಭಿವೃದ್ದಿ ಪೋಲಿಸ್ ಠಾಣಾ ಕಟ್ಟಡಗಳು ಮತ್ತು7 ವಸತಿ ಗೃಹಗಳು ನೂತನ ಅಗ್ನಿ ಶಾಮಕ ಠಾಣೆ, ತಾಲ್ಲೂಕು ಕ್ರಿಡಾಂಗಣ ಮತ್ತು ಅತ್ಯಾದುನಿಕ ಸುಸರ್ಜಿತಒಳಾಂಗಣ ಕ್ರಿಡಾಂಗಣ, ವಿದ್ಯಾರ್ಥಿ ನಿಲಯ ಕಟ್ಟಡಗಳು, ಪ್ರಥಮ ಮತ್ತು ಪಿ.ಯು. ಕಾಲೇಜುಗಳ ಕಟ್ಟಡಗಳು, ಹಾಗೂ ಪ್ರಾಥಮಿಕ, ಪ್ರೌಢಾ ಶಾಲಾ ಕಟ್ಟಡಗಳು, ಹಾಗೂ 6 ತಾಲ್ಲೂಕಿನಲ್ಲಿ 6 ಪ್ರೌಢಾ ಶಾಲೆಗಳ ಮಂಜೂರಾತಿ. ಅಂಗನವಾಡಿ ಕಟ್ಟಡಗಳು, ಸ್ತ್ರೀ ಶಕ್ತಿ ಭವನ, ನೂತನ ಪ್ರವಾಸಿ ಮಂದಿರ, ಹೊನ್ನಾಳಿ ಪಟ್ಟಣದ ಶುದ್ದವಾದ ಕುಡಿಯುವ ನೀರಿನ ಘಟಕ, ಪಟ್ಟಣದ ಒಳಚರಂಡಿಯ ವ್ಯವಸ್ಥೆ ನಗರಾತ್ತೋನ ಯೋಜನೆಯಡಿಯಲ್ಲಿ ನಗರದ ಸರ್ವಾಗೀಂಣ ಅಭಿವೃದ್ದಿ ಹೀಗೆ ಹಲವಾರು ಏಣಿಕೆಗೆ ಸಿಗದಷ್ಟು, ಬರಪೂರಾ ಅಭಿವೃದ್ದಿ ಕಾಮಾಗಾರಿಯನ್ನು ಕೈಗೊಂಡಿರುವುದು ಇವರ ಜನಪರ ಕಾಳಜಿಗೆ ತಾಲ್ಲೂಕಿನಲ್ಲಿ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಮಹಾತ್ವಕಾಂಕ್ಷಿ ಯೋಜನೆಗಳ ಸಾಧನೆಗಳು ಕೇವಲ ಮಾತಗದೆ ಸಾಧಿಸಿ ತೋರಿಸಿದ ಸಾಧನೆಗಳನ್ನು ಇಂದಿಗೂ ತಾಲ್ಲೂಕಿನ ಜನತೆ ದಿನನಿತ್ಯ ಕಣ್ತೊಂಬಿ ಸ್ಮರಿಸಿಕೊಳ್ಳುತ್ತಿದ್ದಾರೆ, ಅಂದಿನ ಬಿಜೆಪಿ ಸರ್ಕಾರದ ಜನಪರ ಕಾಳಜಿಯ ಅಭಿವೃದ್ದಿ ಅರಕಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಾಲ್ಲೂಕಿಗೆ ನೀಡಿದ ನಮ್ಮ ಸರ್ಕಾರದ ಅನೇಕ ಮಹಾತ್ವಕಾಂಕ್ಷಿಯೋಜನೆಗಳನ್ನು ಇಂದಿನ ಕಾಂಗ್ರೇಸ್ ಸರ್ಕಾರದ ಶಾಸಕರು ನಮ್ಮದೆಂದು ಹೇಳಿಕೊಂಡುಕೋಟಿಗಟ್ಟಲೆ ಹಣ ತಂದಿರುವುದಾಗಲಿ ಹಾಗೂ ಸುಳ್ಳು ಭರವಸೆಗಳನ್ನು ಜನತೆ ನಂಬುವುದಿಲ್ಲ.ತಾಲ್ಲೂಕಿನಲ್ಲಿ ಇಂತಹ ಜನಪರ ಯೋಜನೆಗಳನ್ನು ಯಾರು ಮಂಜೂರು ಮಾಡಿಸಿದ್ದಾರೆಂಬುದು ಜನರಿಗೆ ಗೊತ್ತಿಲ್ಲದ ವಿಷಯವಲ್ಲ. ಅಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಜನಸ್ಪಂದನದಂತಹ 43 ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿ ನಮ್ಮ ಸರ್ಕಾರದ ಜಾರಿಗೆ ತಂದ ಚಂದಾ ಸುರಕ್ಷಾ ವೃದ್ಯಾಪಿ ವೇತನ, ಅಂಗವಿಲಕ, ವಿಧವಾ, ರಾಷ್ಟ್ರೀಯ ಕುಟುಂಬ ಪರಿಹಾರ ನಿಧಿ, ಭಾಗ್ಯ ಲಕ್ಷ್ಮೀ ಬಾಂಡ್, ತಾಳಿ ಭಾಗ್ಯ, ಭೂಚೇತನ ಮುಂತಾದ ಹಲವಾರು ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಸುಮಾರು ಐವತ್ತು ಸಾವಿರ ಪಲಾನುಭವಿಗಳಿಗೆ ಇದರ ಲಾಭಕೊಟ್ಟ ಏಕೈಕ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ.

ನೋಂದವರ ಧ್ವನಿ

ತಾಲ್ಲೂಕಿನಲ್ಲಿ ಬರಗಾಲ ಪೀಡಿತದಿಂದ ಸಾವಿಗೀಡಾದ ಹಲವಾರು ಹಾಗೂ ರಾಜ್ಯ ಹಿತರೆಡೆ ಆತ್ಮ ಹತ್ಯೆ ಮಾಡಿಕೊಂಡಿರುವ ಮೃತ ರೈತರ ಮನೆಗೆ ತೆರಳಿ ಸಾತ್ವಂನ ಹೇಳುವ ಮೂಲಕ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ತಮ್ಮ ಹೋರಾಟದ ಮೂಲಕ ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿ ನೋಂದವರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಖ್ಯಮಂತ್ರಿ ಪರಿಹಾರ ನಿಧಿ

ತಮ್ಮ ಅವಧಿಯಲ್ಲಿ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳ ಪೈಕಿ 10 ಕೋಟಿಗೂ ಹೆಚ್ಚು ಹಲವಾರು ಕಾಯಿಲೆಗಳಿಗೆ ತುತ್ತಾದ, ಬಡರೋಗಿಗಳ ಚಿಕಿತ್ಸೆಗೆ ಮತ್ತು ಚಿಕಿತ್ಸೆ ಪಲಿಸದೇ ಮರಣ ಹೊಂದಿದ ಕುಟಂಬಸ್ಥರಿಗೆ ಮುಖ್ಯಮಂತ್ರಿ ಪರಿಹಾರ ನಿಧಿ ವದಿಗಿಸುವಲ್ಲಿ ಮಂಚೂಣಿ ಸ್ಥಾನದಲ್ಲಿದ್ದರು.

ವೈಯಕ್ತಿಕ ಪರಿಹಾರ

ತಾಲ್ಲೂಕಿನಲ್ಲಿ ದಿನದಿತ್ಯ ಯಾವುದೇ ಸಾವು ನೊವುಗಳು ಸಂಭವಿಸಿದರೂ ಕೇವಲ ದೂರವಾಣಿ ಕರೆಯನ್ನು ಸ್ವೀಕರಿಸಿ ತಕ್ಷಣ ನೊಂದವರ ಮನೆಗೆ ತೆರಳಿ ಬಡವ ಬಲ್ಲಿದನೆಂದ ಭೇದವಿಲ್ಲದೆ ಕೈಲಾದಷ್ಟು ಪ್ರಮಾಣಿಕವಾಗಿ ಧನ ಸಹಾಯವನ್ನು ನೀಡಿದ್ದಾರೆ, ಅಲ್ಲದೆ ಪ್ರತಿನಿತ್ಯ ತಮ್ಮ ಕಷ್ಟ ಹೇಳಿಕೊಂಡು, ಬಡ ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಅಂಗವಿಕಲರು, ವೃದ್ದರು ಆರ್ಥಿಕವಾಗಿ ಹಿಂದುಳಿದವರು, ಮದುವೆ ಇನ್ನು ಮುಂತಾದ ಶುಭ ಕಾರ್ಯಗಳಿಗೂ ಕೂಡಾ ಎಂದು ವಾಪಸ್ಸು ಕಳಿಸದೇ ಕೈಲಾದಷ್ಟು ಧನ ಸಹಾಯ ನೀಡುತ್ತಿರುವುದು ಇಂದಿಗೂ ಅವ್ಯಾತವಾಗಿ ಮುಂದುವರೆದಿದೆ

Get Latest Updates through App.